Widgets Magazine

ಅರರೇ...! ಕಗಿಸೋ ರಬಾಡರನ್ನು ಕೆಣಕದೇ ಸುಮ್ಮನೇ ಬಿಟ್ಟ ವಿರಾಟ್ ಕೊಹ್ಲಿ

ಪುಣೆ| Krishnaveni K| Last Modified ಶನಿವಾರ, 12 ಅಕ್ಟೋಬರ್ 2019 (09:27 IST)
ಪುಣೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ದ.ಆಫ್ರಿಕಾ ಬೌಲರ್ ಕಗಿಸೊ ರಬಾಡಾ ನಡುವೆ ಆಗಾಗ ಮೈದಾನದಲ್ಲಿ ನಡೆಯುವ ವಾಗ್ವಾದಗಳು, ಸ್ಲೆಡ್ಜಿಂಗ್ ಗಳು ಕ್ರಿಕೆಟ್ ಪ್ರಿಯರಿಗೆ ಹೊಸತೇನಲ್ಲ.

 
ಕೊಹ್ಲಿ ತಮ್ಮ ಪಕ್ಕಾ ವೈರಿಗಳನ್ನು ಕೆಣಕದೇ ಬಿಡುವವರೇ ಅಲ್ಲ. ಆದರೆ ದ.ಆಫ್ರಿಕಾ ವಿರುದ್ಧದ ದ್ವಿತೀಯ ದಿನದಾಟದಲ್ಲಿ ಮಾತ್ರ ಕೊಹ್ಲಿ ನಡೆದುಕೊಂಡ ರೀತಿ ಅಚ್ಚರಿ ಉಂಟುಮಾಡಿತ್ತು.
 
ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಓವರ್ ಥ್ರೋ ಮಾಡಿದ ರಬಾಡಾ ಕೊಹ್ಲಿಗೆ ಸುಲಭವಾಗಿ ರನ್ ಬಿಟ್ಟುಕೊಟ್ಟರು. ಸಾಮಾನ್ಯವಾಗಿ ಇಂತಹ ಸಂದರ್ಭವನ್ನು ಚೆನ್ನಾಗಿಯೇ ಬಳಸಿಕೊಳ್ಳುವ ಕೊಹ್ಲಿ ರಬಾಡಾರನ್ನು ಕೆಣಕದೇ ಬಿಡುವವರೇ ಅಲ್ಲ. ಆದರೆ ನಿನ್ನೆ ಮಾತ್ರ ತದ್ವಿರುದ್ಧವಾಗಿ ನಡೆದುಕೊಂಡ ಕೊಹ್ಲಿ ನಗುತ್ತಲೇ ಹೆಬ್ಬರಳೆತ್ತಿ ಪರವಾಗಿಲ್ಲ ಎನ್ನುವಂತೆ ಸನ್ನೆ ಮಾಡಿದ್ದು ನೋಡಿದರೆ ವೀಕ್ಷಕರಿಗೇ ಅಚ್ಚರಿಯಾಗುವಂತಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :