ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದೆಷ್ಟೋ ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದಾರೆ. ಇಂತಿಪ್ಪ ಕೊಹ್ಲಿ ತಮ್ಮ ಸಹ ಆಟಗಾರನ ಭವಿಷ್ಯಕ್ಕೆ ನೆರವಾದ ಕತೆಯನ್ನು ಅದೇ ಆಟಗಾರನೇ ಹಂಚಿಕೊಂಡಿದ್ದಾರೆ.2016 ರಲ್ಲಿ ಆರ್ ಸಿಬಿ ಪರ ಐಪಿಎಲ್ ಆಡಿದ್ದ ಕ್ರಿಕೆಟಿಗ ಸರ್ಫರಾಜ್ ಖಾನ್ ಆಗ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿರಲಿಲ್ಲವಂತೆ. ಇದೇ ಕಾರಣಕ್ಕೆ ಸಹ ಆಟಗಾರರು ಆತನನ್ನು ಪಾಂಡಾ ಎಂದು ತಮಾಷೆಯಾಗಿ ಕರೆಯುತ್ತಿದ್ದರಂತೆ.2016 ರಲ್ಲಿ ಆರ್ ಸಿಬಿಯಿಂದ ನನ್ನನ್ನು ಕೈಬಿಡಲೂ ಇದೇ