ರಜೆ ಮುಗಿಸಿ ಭಾರತಕ್ಕೆ ಮರಳಿದ ವಿರಾಟ್ ಕೊಹ್ಲಿ

ಮುಂಬೈ, ಮಂಗಳವಾರ, 5 ಫೆಬ್ರವರಿ 2019 (09:24 IST)

ಮುಂಬೈ: ಬಿಡುವಿಲ್ಲದ ಕ್ರಿಕೆಟ್ ನಿಂದ ಬಿಡುವು ಪಡೆದು ಕೆಲವು ದಿನಗಳ ಕಾಲ ಪತ್ನಿ ಜತೆ ನ್ಯೂಜಿಲೆಂಡ್ ನಲ್ಲಿ ರಜೆಯ ಮಜಾ ಅನುಭವಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಭಾರತಕ್ಕೆ ಮರಳಿದ್ದಾರೆ.


 
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಿನ್ನೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೂ ಮೊದಲು ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.
 
ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಕೊಹ್ಲಿ ಆಡುತ್ತಿಲ್ಲ. ನ್ಯೂಜಿಲೆಂಡ್ ನಲ್ಲಿ ಕೊಹ್ಲಿ ದಂಪತಿ ರೊಮ್ಯಾಂಟಿಕ್ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಬಿಗಿ ಭದ್ರತೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೊಹ್ಲಿ ತಾವೇ ಕಾರು ಚಲಾಯಿಸಿಕೊಂಡು ಮನೆಯತ್ತ ತೆರಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಪತ್ನಿ ಅನುಷ್ಕಾ ಶರ್ಮಾ ತದ್ರೂಪು ಕಂಡಿದ್ದೀರಾ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರನ್ನೇ ಹೋಲುವ ಯುವತಿಯ ಫೋಟೋ ...

news

ಅನಿಲ್ ಕುಂಬ್ಳೆ ಕೋಚ್ ಆಗಿರುತ್ತಿದ್ದರೆ ಕೆಎಲ್ ರಾಹುಲ್-ಹಾರ್ದಿಕ್ ಪಾಂಡ್ಯಗೆ ಈ ಗತಿ ಬರುತ್ತಿರಲಿಲ್ಲ!

ಮುಂಬೈ: ಅನಿಲ್ ಕುಂಬ್ಳೆ ಇಂದಿಗೂ ಟೀಂ ಇಂಡಿಯಾ ಕೋಚ್ ಆಗಿರುತ್ತಿದ್ದರೆ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ...

news

ನ್ಯೂಜಿಲೆಂಡ್ ನಾಯಕನ ಬೆಪ್ಪು ನಿರ್ಧಾರಕ್ಕೆ ಬೆಲೆ ತೆತ್ತ ರಾಸ್ ಟೇಲರ್!

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಐದನೇ ಏಕದಿನ ಪಂದ್ಯದಲ್ಲಿ ಔಟ್ ಆಗದೇ ಇದ್ದರೂ, ...

news

ಐಪಿಎಲ್ ವೇಳಾ ಪಟ್ಟಿ ಇಂದು ಪ್ರಕಟಿಸಲಿರುವ ಬಿಸಿಸಿಐ

ಮುಂಬೈ: ಈ ವರ್ಷದ ಐಪಿಎಲ್ ಕ್ರೀಡಾಕೂಟದ ವೇಳಾಪಟ್ಟಿಯನ್ನು ಇಂದು ಬಿಸಿಸಿಐ ಬಿಡುಗಡೆಗೊಳಿಸುವ ಸಾಧ‍್ಯತೆಯಿದೆ.