ಕೊಲಂಬೊ: ಶ್ರೀಲಂಕಾ ವಿರುದ್ಧ ಕ್ರಿಕೆಟ್ ಸರಣಿಗಾಗಿ ದ್ವೀಪ ರಾಷ್ಟ್ರಕ್ಕೆ ತೆರಳಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡಿದೆ. ಕ್ಯಾಂಡಿಯಲ್ಲಿ ಬೀಡುಬಿಟ್ಟಿರುವ ಕ್ರಿಕೆಟಿಗರು, 71 ನೇ ಸ್ವಾತಂತ್ರ್ಯೋತ್ಸವವನ್ನು ಒಟ್ಟಾಗಿ ಆಚರಿಸಿದರು. ನಾಯಕ ವಿರಾಟ್ ಕೊಹ್ಲಿ ಧ್ವಜಾರೋಹಣ ಮಾಡಿದರು.ಇತರ ಕ್ರಿಕೆಟಿಗರು ಸಾಲಾಗಿ ಶಿಸ್ತು ಬದ್ಧರಾಗಿ ನಿಂತು ಧ್ವಜವಂದನೆ ಮಾಡಿದರು. ಕ್ರಿಕೆಟಿಗರ ಜತೆಗೆ ಸಹಾಯಕ ಸಿಬ್ಬಂದಿಗಳು, ಕುಟುಂಬದವರೂ ಉಪಸ್ಥಿತರಿದ್ದರು. ಆಗಸ್ಟ್ 20 ರಿಂದ ಟೀಂ ಇಂಡಿಯಾ ಲಂಕಾ ವಿರುದ್ಧ ಏಕದಿನ