ಮಗುವಿನ ಹಿಂದೆ ಬೀಳಬೇಡಿ! ಮೊದಲೇ ವಾರ್ನ್ ಮಾಡಿದ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಮಂಗಳವಾರ, 12 ಜನವರಿ 2021 (09:42 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇದೀಗ ಹೆಣ್ಣು ಮಗುವಿನ ಪೋಷಕರಾದ ಖುಷಿಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ಹಂಚಿಕೊಳ್ಳುವುದರ ಜೊತೆಗೆ ಕೊಹ್ಲಿ ಮಾಧ್ಯಮಗಳಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
 > ನಮ್ಮ ಖಾಸಗಿತನವನ್ನು ಗೌರವಿಸಿ ಎನ್ನುವುದರ ಮೂಲಕ ಕೊಹ್ಲಿ ತಮ್ಮ ಮಗುವಿನ ಮೇಲೆ ಅತಿಯಾಗಿ ಫೋಕಸ್ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ. ಈ ಮೊದಲು ಅನುಷ್ಕಾ ಶರ್ಮಾ ಕೂಡಾ ಸಂದರ್ಶನವೊಂದರಲ್ಲಿ ನಮ್ಮ ಮಗು ಅತಿಯಾಗಿ ಮಾಧ್ಯಮಗಳಲ್ಲಿ ಬಿಂಬಿತವಾಗದೇ ಇರಲು ಎಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದಿದ್ದರು. ಹೀಗಾಗಿ ಸದ್ಯಕ್ಕಂತೂ ಕೊಹ್ಲಿ-ಅನುಷ್ಕಾ ದಂಪತಿಯ ಮಗುವಿನ ಮುಖ ದರ್ಶನ ಅಭಿಮಾನಿಗಳಿಗೆ ಸಿಗದು.>


ಇದರಲ್ಲಿ ಇನ್ನಷ್ಟು ಓದಿ :