ದುಬೈ: ಎಷ್ಟೋ ದಿನಗಳ ನಂತರ ಕ್ರಿಕೆಟ್ ಪ್ರವಾಸಕ್ಕೆಂದು ಹೊರದೇಶಕ್ಕೆ ಬಂದ ಕ್ರಿಕೆಟಿಗರು ಸಹಜವಾಗಿ ಅಲ್ಲಿ ಎಂಜಾಯ್ ಮಾಡಲು ಮನಸ್ಸು ಮಾಡಬಹುದು. ಆದರೆ ಹಾಗೆ ಮಾಡಿ ಕೊರೋನಾ ಅಪಾಯ ಮೈಮೇಲೆಳೆದುಕೊಳ್ಳಬೇಡಿ ಎಂದು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ. ಐಪಿಎಲ್ ಆಡಲು ದುಬೈಗೆ ಬಂದಿಳಿದಿರುವ ಕೊಹ್ಲಿ ಹುಡುಗರು ಈಗ ಬಯೋ ಸೆಕ್ಯೂರ್ ವಾತಾವರಣದಲ್ಲಿದ್ದಾರೆ. ಇಲ್ಲಿನ ನೀತಿ-ನಿಯಮಗಳನ್ನು ಅಸಡ್ಡೆ ಮಾಡಬೇಡಿ ಎಂದು ಕೊಹ್ಲಿ ಕರೆ ನೀಡಿದ್ದಾರೆ. ನಾವಿಲ್ಲಿಗೆ ಬಂದಿರುವುದು ಕ್ರಿಕೆಟ್