ವಿರಾಟ್ ಕೊಹ್ಲಿ ಹೇಳಿದರೆಂದು ರವಿಶಾಸ್ತ್ರಿ ಕೋಚ್ ಆಗಲ್ಲ!

ಮುಂಬೈ| Krishnaveni K| Last Modified ಗುರುವಾರ, 1 ಆಗಸ್ಟ್ 2019 (09:24 IST)
ಮುಂಬೈ: ಟೀಂ ಇಂಡಿಯಾ ಮುಂದಿನ ಕೋಚ್ ಆಗಿ ರವಿಶಾಸ್ತ್ರಿಯೇ ಮುಂದುವರಿದರೆ ಸಂತೋಷ ಎಂದು ನೇರವಾಗಿ ಹಾಲಿ ಕೋಚ್ ಬೆಂಬಲಿಸಿದ್ದ ನಾಯಕ ವಿರಾಟ್ ಕೊಹ್ಲಿ ಹೇಳಿಕೆಗೆ ಸಲಹಾ ಸಮಿತಿ ಸದಸ್ಯ ಅಂಶುಮಾನ್ ಗಾಯಕ್ ವಾಡ್ ಪ್ರತಿಕ್ರಿಯಿಸಿದ್ದಾರೆ.

 
ಕೊಹ್ಲಿ ಅವರ ವೈಯಕ್ತಿಕ ಅಭಿಪ್ರಾಯ ಹೊರಹಾಕಿರಬಹುದು. ಆದರೆ ಕೊಹ್ಲಿ ಹೇಳಿದರೆಂದು ರವಿಶಾಸ್ತ್ರಿಯನ್ನೇ ಕೋಚ್ ಆಗಿ ಆಯ್ಕೆ ಮಾಡಲ್ಲ ಎಂದಿದ್ದಾರೆ.
 
‘ನಾವು ಒಂದು ಸಮಿತಿಯ ಸದಸ್ಯರು. ನಾವು ಮೂವರು ಸದಸ್ಯರು ಜತೆಯಾಗಿ ಕೂತು ಮುಕ್ತ ಮನಸ್ಸಿನಿಂದ ಹೊಸ ಕೋಚ್ ಆಯ್ಕೆ ಮಾಡಲಿದ್ದೇವೆ. ಕೊಹ್ಲಿ ಹೇಳಿಕೆ ನಮ್ಮ ಮೇಲೆ ಪ್ರಭಾವ ಬೀರಲ್ಲ’ ಎಂದಿದ್ದಾರೆ. ಕೊಹ್ಲಿ ಹೀಗೆ ಬಹಿರಂಗವಾಗಿ ಹೇಳಿದ್ದರಿಂದ ರವಿಶಾಸ್ತ್ರಿಯನ್ನೇ ಕೋಚ್ ಆಗಿ ಮುಂದುವರಿಸಬಹುದು ಎನ್ನಲಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :