ಗಂಗೂಲಿ ದಾಖಲೆ ಮುರಿದು, ಧೋನಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಆಂಟಿಗುವಾ, ಸೋಮವಾರ, 26 ಆಗಸ್ಟ್ 2019 (10:37 IST)

ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೌರವ್ ಗಂಗೂಲಿ ದಾಖಲೆ ಮುರಿದು, ಧೋನಿ ದಾಖಲೆ ಸರಿಗಟ್ಟಿದ್ದಾರೆ.


 
ವಿರಾಟ್ ಕೊಹ್ಲಿ ನಾಯಕರಾಗಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ದಾಖಲೆಯ ಪಟ್ಟಿಯಲ್ಲಿ ಈಗ ಧೋನಿ ಜತೆಗೆ ಜಂಟಿ ನಂ.1 ಸ್ಥಾನ ಹಂಚಿಕೊಂಡಿದ್ದಾರೆ. ಇದು ನಾಯಕರಾಗಿ ಕೊಹ್ಲಿಗೆ 27 ನೇ ಗೆಲುವಾಗಿತ್ತು. 47 ಪಂದ್ಯಗಳಿಂದ 27 ಗೆಲುವು ದಾಖಲಿಸಿದ್ದರೆ ಧೋನಿ 60 ಪಂದ್ಯಗಳಿಂದ 27 ಗೆಲುವಿನ ದಾಖಲೆ ಹೊಂದಿದ್ದಾರೆ. ಗಂಗೂಲಿ 49 ಪಂದ್ಯಗಳಿಂದ 21 ಗೆಲುವು ದಾಖಲಿಸಿದ್ದರು.
 
ಅಲ್ಲದೆ ವಿದೇಶಗಳಲ್ಲಿ ಅತೀ ಹೆಚ್ಚು ಗೆಲುವು ದಾಖಲಿಸಿದ ಭಾರತೀಯ ನಾಯಕ ಎಂಬ ದಾಖಲೆ ಮಾಡಿದರು. ಈ ಮೊದಲು 28 ಪಂದ್ಯಗಳಿಂದ 11 ಗೆಲುವು ದಾಖಲಿಸಿದ ಗಂಗೂಲಿ  ಅಗ್ರ ಸ್ಥಾನದಲ್ಲಿದ್ದರು. ಈಗ ಕೊಹ್ಲಿ 12 ನೇ ಗೆಲುವು ದಾಖಲಿಸಿ ನಂ.1 ಸ್ಥಾನ ಪಡೆದರು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹೊಸ ಲುಕ್ ನೊಂದಿಗೆ ಪ್ರತ್ಯಕ್ಷರಾದ ಧೋನಿ

ಜೈಪುರ: ಭಾರತೀಯ ಸೇನೆಯಲ್ಲಿ ಕರ್ತವ್ಯ ಮುಗಿಸಿದ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಕೆಲವು ಕಾಲ ...

news

ಮೊದಲ ಟೆಸ್ಟ್ ಪಾಸಾದ ಟೀಂ ಇಂಡಿಯಾ: ವಿಂಡೀಸ್ ವಿರುದ್ಧ ಭರ್ಜರಿ ಗೆಲುವು

ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 318 ರನ್ ...

news

ವಿಶ್ವ ಚಾಂಪಿಯನ್ ಆದ ಪಿವಿ ಸಿಂಧುಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ...

news

ನಾಯಕ-ಉಪನಾಯಕನ ಜತೆಯಾಟ: ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನಾಟದ ಅಂತ್ಯಕ್ಕೆ ...