ಸೆಂಚೂರಿಯನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ತಮ್ಮ ಅನುಭವವನ್ನೆಲ್ಲಾ ಧಾರೆಯೆರೆದು ಆಡುತ್ತಿದ್ದು, ಭರ್ಜರಿ ಶತಕ ಗಳಿಸಿ ತಂಡವನ್ನು ಆಧರಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಬಾಳ್ವೆಯ 21 ನೇ ಶತಕ ದಾಖಲಿಸಿದರು. ನಾಯಕನಾಗಿ ಇದು ಅವರ 14 ನೇ ಶತಕ. ಕಷ್ಟದ ಸಂದರ್ಭದಲ್ಲಿ ತಾಳ್ಮೆಯಿಂದ ಬಂದ ಶತಕವಾದ್ದರಿಂದ ಇದು ಕೊಹ್ಲಿ ಶತಕಗಳ ಸಾಲಿನಲ್ಲಿ ವಿಶೇಷವಾಗಿದೆ.ಇದರೊಂದಿಗೆ ಕೊಹ್ಲಿ ನಾಯಕನಾಗಿ ದ.ಆಫ್ರಿಕಾ ನೆಲದಲ್ಲಿ