ವಿರಾಟ್ ಕೊಹ್ಲಿ ಪುಡಿಗಟ್ಟಿದ ಆ ಎರಡು ಪ್ರಮುಖ ದಾಖಲೆಗಳು

ಇಂಧೋರ್| Krishnaveni K| Last Modified ಬುಧವಾರ, 8 ಜನವರಿ 2020 (09:52 IST)
ಇಂಧೋರ್: ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡು ಪ್ರಮುಖ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

 
ನಾಯಕನಾಗಿ ಕೊಹ್ಲಿ ಸ್ವದೇಶದಲ್ಲಿ ಟಿ20 ಕ್ರಿಕೆಟ್ ನಲ್ಲಿ 1000 ರನ್ ಗಳಿಸಿದ ನಾಯಕರೆನಿಸಿಕೊಂಡರು. ಇದಕ್ಕೂ ಮೊದಲು ಎಂಎಸ್ ಧೋನಿ ಈ ದಾಖಲೆ ಮಾಡಿದ್ದರು. ಇದೀಗ ಕೊಹ್ಲಿ ದ್ವಿತೀಯರೆನಿಸಿಕೊಂಡಿದ್ದಾರೆ.
 
ಇನ್ನು ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಪಂದ್ಯಕ್ಕೆ ಮೊದಲು 2633 ರನ್ ಗಳಿಸಿ ರೋಹಿತ್ ಶರ್ಮಾ ಜತೆಗೆ ಜಂಟಿ ಸ್ಥಾನ ಹಂಚಿಕೊಂಡಿದ್ದರು. ಇದೀಗ 30 ರನ್ ಗಳಿಸಿರುವ ಕೊಹ್ಲಿ ರೋಹಿತ್ ರನ್ನು ಹಿಂದಿಕ್ಕಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :