ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ನಾಳೆಯಿಂದ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ಮೊದಲು ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದ ಮೈದಾನಕ್ಕೆ ಸ್ಥಳೀಯ ಕಾರ್ಪೆಂಟರ್ ನನ್ನು ಕರೆಸಿಕೊಂಡಿದ್ದಾರೆ. ಟೆಸ್ಟ್ ಸರಣಿಗೂ ಕಾರ್ಪೆಂಟರ್ ಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಆದರೆ ಸರಣಿಗೆ ಸಜ್ಜಾಗುತ್ತಿರುವ ಕೊಹ್ಲಿಗೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ಅವರು ತಮ್ಮ ಬ್ಯಾಟ್ ವಿಷಯದಲ್ಲಂತೂ ಸ್ವಲ್ಪವೂ ರಾಜಿ ಮಾಡಿಕೊಳ್ಳುವ ಅಸಾಮಿಯಲ್ಲ.ಹೀಗಾಗಿ ಈಡನ್ ಮೈದಾನದಲ್ಲಿ ಅಭ್ಯಾಸ