ರೋಹಿತ್ ಇಲ್ಲದ ವೇಳೆ ದಾಖಲೆಗೆ ಕನ್ನ ಹಾಕಲು ರೆಡಿಯಾದ ವಿರಾಟ್ ಕೊಹ್ಲಿ

ಗುವಾಹಟಿ| Krishnaveni K| Last Modified ಭಾನುವಾರ, 5 ಜನವರಿ 2020 (09:13 IST)
ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದಿನಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆ ಮಾಡಲು ಸಜ್ಜಾಗಿದ್ದಾರೆ.

 
ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಈಗ ರೋಹಿತ್ ಶರ್ಮಾ ಮತ್ತು  ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಇಬ್ಬರೂ 2663 ರನ್ ಗಳಿಸಿ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ.
 
ಈ ಸರಣಿಯಲ್ಲಿ ರೋಹಿತ್ ಆಡದೇ ಇರುವುದರಿಂದ ಕೊಹ್ಲಿಗೆ ರೋಹಿತ್ ರನ್ನು ಹಿಂದಿಕ್ಕಿ ತಾವೇ ಅಗ್ರ ಸ್ಥಾನಕ್ಕೇರಲು ಅವಕಾಶ ಸಿಕ್ಕಿದೆ. ಇದಕ್ಕಾಗಿ ವಿರಾಟ್ ಇಂದು ಒಂದು ರನ್ ಗಳಿಸಿದರೂ ಸಾಕು.
ಇದರಲ್ಲಿ ಇನ್ನಷ್ಟು ಓದಿ :