ಚೆನ್ನೈ: ಟೀಂ ಇಂಡಿಯಾ ಆಡುವ ಬಳಗ ಆಯ್ಕೆ ವಿಚಾರದಲ್ಲಿ ಪದೇ ಪದೇ ನಾಯಕ ವಿರಾಟ್ ಕೊಹ್ಲಿ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಅದೀಗ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಮುಂದುವರಿದಿದೆ.ಸರಿಯಾದ ತಂಡವನ್ನು ಆಯ್ಕೆಮಾಡುವಲ್ಲಿ ಕೊಹ್ಲಿ ಪದೇ ಪದೇ ಸೋಲುತ್ತಾರೆ. ಅನಿರೀಕ್ಷಿತವಾಗಿ ಮಾಡುವ ಬದಲಾವಣೆಗಳು, ಅರ್ಹ ಆಟಗಾರರನ್ನು ಮೂಲೆಗುಂಪು ಮಾಡುವುದು, ಅನರ್ಹರಾದವರನ್ನು ಆಯ್ಕೆ ಮಾಡುವುದು ಇತ್ಯಾದಿ ವಿಚಾರಕ್ಕೆ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮೂಡುತ್ತಿರುತ್ತದೆ. ಇದೀಗ ಕಳೆದ ಪಂದ್ಯದಲ್ಲಿ ಭಾರತಕ್ಕೆ ಅಗ್ರ