ದೆಹಲಿ: ಶತಕ ಗಳಿಸುವುದು ಇಷ್ಟು ಸುಲಭವೇ? ಹಾಗೆಂದು ವಿರಾಟ್ ಕೊಹ್ಲಿಯ ಆಟ ನೋಡಿದರೆ ಅನಿಸುವುದು ಸಹಜ. ಲೀಲಾಜಾಲವಾಗಿ ಮತ್ತೊಂದು ದ್ವಿಶತಕ ಹೊಡೆದ ಕೊಹ್ಲಿಯ ಅಬ್ಬರದಿಂದಾಗಿ ಲಂಕಾ ವಿರುದ್ಧ ಟೀಂ ಇಂಡಿಯಾ ದ್ವಿತೀಯ ದಿನ ಊಟದ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 500 ರನ್ ಗಳಿಸಿದೆ. ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಬಾಳ್ವೆಯ 6 ನೇ ದ್ವಿಶತಕ ಹೊಡೆದರು. ಅಷ್ಟೇ ಅಲ್ಲ, ನಾಯಕನಾಗಿ ಅತೀ ಹೆಚ್ಚು ದ್ವಿಶತಕ ದಾಖಲಿಸಿದ