ವಿರಾಟ್ ಕೊಹ್ಲಿಗೆ ಗೋಲ್ಡನ್ ಡಕ್ ನೀಡಿದ್ದಕ್ಕೆ ವಿಂಡೀಸ್ ನಾಯಕನ ಮೇಲೆ ಮುಯ್ಯಿ ತೀರಿಸಿಕೊಂಡ ಶಮಿ!

ವಿಶಾಖಪಟ್ಟಣ| Krishnaveni K| Last Modified ಗುರುವಾರ, 19 ಡಿಸೆಂಬರ್ 2019 (09:38 IST)
ವಿಶಾಖಪಟ್ಟಣ: ವಿಶಾಖಪಟ್ಟಣದ ಮೈದಾನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಅದೃಷ್ಟದ ತಾಣ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಕೊಹ್ಲಿ ಅತೀ ಹೆಚ್ಚು ರನ್ ಗಳಿಸಿದ್ದರು.

 
ಆದರೆ ನಿನ್ನೆಯ ಪಂದ್ಯದಲ್ಲಿ ಮಾತ್ರ ವಿಂಡೀಸ್ ಬೌಲರ್ ಗಳು ಕೊಹ್ಲಿಯ ಈ ಅದೃಷ್ಟಕ್ಕೆ ಕೊಳ್ಳಿ ಇಟ್ಟರು. ಕೆಎಲ್ ರಾಹುಲ್ ಔಟಾದ ಬಳಿಕ ಕ್ರೀಸ್ ಗೆ ಬಂದ ಕೊಹ್ಲಿ ರೋಹಿತ್ ಶರ್ಮಾ ಜತೆಗೆ ಹೊಡೆಬಡಿಯ ಇನಿಂಗ್ಸ್ ಆಡಿ ಭಾರತದ ಮೊತ್ತ ಉಬ್ಬಿಸುತ್ತಾರೆ ಎಂದೇ ಎಲ್ಲರ ನಿರೀಕ್ಷೆಯಾಗಿತ್ತು.
 
ಆದರೆ ಮೊದಲ ಎಸೆತದಲ್ಲಿಯೇ ವಿಂಡೀಸ್ ನಾಯಕ ಪೊಲ್ಲಾರ್ಡ್ ಎಸೆತದಲ್ಲಿ ಕ್ಯಾಚ್ ಔಟ್ ಆಗಿ ನಿರ್ಗಮಿಸಿದರು. ಕೊಹ್ಲಿಯ ಭರ್ಜರಿ ಇನಿಂಗ್ಸ್ ನೋಡುವ ಕಾತುರದಲ್ಲಿದ್ದ ಪ್ರೇಕ್ಷಕರಿಗೂ ತೀರಾ ನಿರಾಸೆಯಾಗಿತ್ತು. ವಿಶೇಷವೆಂದರೆ ಕೊಹ್ಲಿ ಔಟಾದ ರೀತಿಯಲ್ಲೇ ವಿಂಡೀಸ್ ನಾಯಕ ಪೊಲ್ಲಾರ್ಡ್ ಕೂಡಾ ಶೂನ್ಯ ಸಂಪಾದಿಸಿ ಶಮಿಗೆ ವಿಕೆಟ್ ಒಪ್ಪಿಸಿ ನಡೆದರು. ಇದು ಕಾಕತಾಳೀಯವಾದರೂ ಇಬ್ಬರೂ ನಾಯಕರೂ ಶೂನ್ಯ ಸಂಪಾದಿಸಿ ಸಮಬಲರಾದರು!
ಇದರಲ್ಲಿ ಇನ್ನಷ್ಟು ಓದಿ :