ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಧೋನಿ ಮಾಡಿದ್ದ ದಾಖಲೆಯೊಂದನ್ನು ಮುರಿಯುವ ಹಾದಿಯಲ್ಲಿದ್ದಾರೆ. ಧೋನಿ ನಾಯಕನಾಗಿ ಸತತ 9 ಏಕದಿನ ಪಂದ್ಯಗಳನ್ನು ಗೆದ್ದು ದಾಖಲೆ ಮಾಡಿದ್ದರು. ಇದೀಗ ಧೋನಿ ನಂತರ ಟೀಂ ಇಂಡಿಯಾಗೆ ನಾಯಕರಾಗಿರುವ ಕೊಹ್ಲಿ ಆ ದಾಖಲೆಯನ್ನು ಮೀರುವ ಉತ್ಸಾಹದಲ್ಲಿದ್ದಾರೆ.ಕೊಹ್ಲಿ ಇದುವರೆಗೆ 37 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 29 ಗೆಲುವು ಕಂಡಿದ್ದಾರೆ. ಕೇವಲ 7