ಬೆಂಗಳೂರು: ವಿರಾಟ್ ಕೊಹ್ಲಿಗೆ ಈಗ ತಂಡದಲ್ಲಿ ಎಲ್ಲವೂ ಸರಿಯಿದೆ. ಆರಂಭಿಕರು ಉತ್ತಮ ಆರಂಭ ಒದಗಿಸುತ್ತಿದ್ದಾರೆ, ಮಧ್ಯಮ ಕ್ರಮಾಂಕ ಸಿಡಿಯುತ್ತಿದೆ, ಬೌಲರ್ ಗಳು ಬೆಂಕಿ ಉಗುಳುತ್ತಿದ್ದಾರೆ. ಹೀಗಾಗಿ ಪರ್ಫೆಕ್ಟ್ 10 ಮೇಲೆ ಕೊಹ್ಲಿ ಕಣ್ಣು ನೆಟ್ಟಿದೆ.ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಔಪಚಾರಿಕ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಗೆದ್ದಿರುವ ಕೊಹ್ಲಿ ಪಡೆ ಇದೀಗ ತನ್ನ ಸಶಕ್ತ ಬೆಂಚ್ ಪಡೆಯ ಪರೀಕ್ಷೆಗೆ ಸಿದ್ಧವಾಗಿದೆ.ಈ ಪಂದ್ಯವನ್ನೂ ಟೀಂ ಇಂಡಿಯಾ