ನವದೆಹಲಿ: ದ.ಆಫ್ರಿಕಾ ಟೆಸ್ಟ್ ಸರಣಿ ಸೋತಿದ್ದೇ ತಡ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಇದುವರೆಗೆ ತಲೆ ಮೇಲೆ ಕೂರಿಸಿಕೊಂಡು ಮೆರೆಸುತ್ತಿದ್ದವರೆಲ್ಲಾ ಟೀಕಿಸಲು ಪ್ರಾರಂಭಿಸಿದ್ದಾರೆ. ಮೊನ್ನೆಯಷ್ಟೇ ಇಂಗ್ಲೆಂಡ್ ಮಾಜಿ ಆಟಗಾರ ಮೈಕ್ ಹೋಲ್ಡಿಂಗ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ರನ್ ಗಳಿಸಿದರಷ್ಟೇ ಶ್ರೇಷ್ಠ ಎನ್ನಲು ಸಾಧ್ಯ. ಈಗ ಆತ ಬೆಸ್ಟ್ ಅಷ್ಟೇ ಶ್ರೇಷ್ಠ ಅಲ್ಲ ಎಂದಿದ್ದರು.ಇದೀಗ ದ.ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಸರದಿ. ಗ್ರೇಮ್ ಸ್ಮಿತ್, ಕೊಹ್ಲಿಯ ನಾಯಕತ್ವದ