ಬೀದಿ ನಾಯಿಗಳ ರಕ್ಷಣೆಗೆ ಮುಂದಾದ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಬುಧವಾರ, 15 ಸೆಪ್ಟಂಬರ್ 2021 (09:10 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್‍ ಕೊಹ್ಲಿ ತಮ್ಮ ಫೌಂಡೇಷನ್ ಮೂಲಕ ಹಲವು ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ಇದೀಗ ಕ್ರಿಕೆಟಿಗ ಕೆಲವು ಸಂಸ್ಥೆಗಳ ನೆರವಿನೊಂದಿಗೆ ಬೀದಿ ನಾಯಿಗಳ ರಕ್ಷಣೆಗೆ ಮುಂದಾಗಿದ್ದಾರೆ.

 
ಬೇರೆ ಫೌಂಡೇಷನ್ ಗಳ ನೆರವಿನೊಂದಿಗೆ ವಿರಾಟ್ ಕೊಹ್ಲಿ ಫೌಂಡೇಷನ್ ಕೈಜೋಡಿಸಿದ್ದು, ಬೀದಿ ನಾಯಿಗಳ ರಕ್ಷಣೆ, ಗಾಯಗೊಂಡ ನಾಯಿಗಳಿಗೆ ಚಿಕಿತ್ಸೆ ನೀಡುವುದು ಇತ್ಯಾದಿ ಸಂರಕ್ಷಣೆ ಕೆಲಸಗಳಿಗಾಗಿ ಮುಂಬೈನಲ್ಲಿ ಎರಡು ಶೆಲ್ಟರ್ ಹೋಂ ನಿರ್ಮಿಸಿದ್ದಾರೆ.
 
ಇದೀಗ ಆ ಶೆಲ್ಟರ್ ಹೋಂ ತಯಾರಾಗಿದ್ದು, ಇನ್ನೀಗ ತನ್ನ ಕಾರ್ಯಾರಂಭ ಮಾಡಲಿದೆ ಎಂದು ಕೊಹ್ಲಿ ಹೇಳಿದ್ದಾರೆ. ಇನ್ನು, ಕೊಹ್ಲಿಯ ಈ ಕೆಲಸವನ್ನು ಸ್ಯಾಂಡಲ್  ವುಡ್ ನಟ ದಿಗಂತ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :