ದಿ ಓವಲ್: ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು 1-4 ಅಂತರದಿಂದ ಸೋತ ಬಳಿಕ ಮಾಧ್ಯಮಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಸಿಟ್ಟಿಗೆದ್ದ ಪ್ರಸಂಗ ನಡೆದಿದೆ.ಪತ್ರಕರ್ತರೊಬ್ಬರು ಕೋಚ್ ರವಿಶಾಸ್ತ್ರಿ ಹೇಳಿದಂತೆ ನಿಮ್ಮದು ಭಾರತ ಇದುವರೆಗೆ ಕಂಡ ಶ್ರೇಷ್ಠ ತಂಡ ಎಂದು ನಂಬುತ್ತೀರಾ ಎಂದು ಪ್ರಶ್ನಿಸಿದರು. ಇದು ಕೊಹ್ಲಿಯನ್ನು ಕೆರಳಿಸಿದೆ.ನಮ್ಮದು ಬೆಸ್ಟ್ ತಂಡ ಎಂದು ನಾವು ನಂಬುತ್ತೇವೆ. ಯಾಕೆ ಆಗಬಾರದು? ಎಂದು ಕೊಹ್ಲಿ ಆದಷ್ಟು ಸಂಯಮದಿಂದಲೇ ಹೇಳಿದರು. ಮತ್ತೆ ಆ ಪತ್ರಕರ್ತ