ಲಂಡನ್: ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಪಂದ್ಯದ ವೇಳೆ ಮೈದಾನದಲ್ಲಿ ಕುಳಿತು ಟೀಂ ಇಂಡಿಯಾ ಕ್ರಿಕೆಟಿಗರನ್ನು ಪ್ರೋತ್ಸಾಹಿಸಿದ್ದ 87 ರ ಅಜ್ಜಿಗೆ ವಿರಾಟ್ ಕೊಹ್ಲಿ ತಾವು ನೀಡಿದ್ದ ಭರವಸೆ ಉಳಿಸಿಕೊಂಡಿದ್ದಾರೆ.ಪಂದ್ಯದ ನಂತರ ಅಜ್ಜಿಯನ್ನು ಭೇಟಿ ಮಾಡಿದ್ದ ಕೊಹ್ಲಿ, ರೋಹಿತ್ ಶರ್ಮಾ ಕಾಲಿಗೆರಗಿ ಆಶೀರ್ವಾದ ಪಡೆದಿದ್ದರು. ಈ ವೇಳೆ ಕೊಹ್ಲಿ ಅಜ್ಜಿ ಚಾರುಲತಾ ಪಟೇಲ್ ಬಳಿ ನಾವು ಆಡುವ ಎಲ್ಲಾ ಪಂದ್ಯಗಳಿಗೆ ಹಾಜರಾಗಬೇಕು ಎಂದಿದ್ದರಂತೆ.ಆಗ ಅಜ್ಜಿ ನನ್ನ ಬಳಿ ಟಿಕೆಟ್ ಇಲ್ಲ ಎಂದಿದ್ದರಂತೆ.