ಸಿಡ್ನಿ: ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮೊದಲ ಸರಣಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿದ ಯುವ ಬೌಲರ್ ಟಿ ನಟರಾಜನ್ ಗೆ ಭರ್ಜರಿ ಗಿಫ್ಟ್ ಕೊಡಲು ವಿರಾಟ್ ಕೊಹ್ಲಿ ನಿರ್ಧರಿಸಿದಂತಿದೆ. ಕಿರು ಮಾದರಿ ಕ್ರಿಕೆಟ್ ನಲ್ಲಿ ರನ್ ನಿಯಂತ್ರಿಸುವುದರ ಜತೆಗೆ ವಿಕೆಟ್ ಕಿತ್ತು ಸಮತೋಲಿತ ಬೌಲಿಂಗ್ ಮಾಡಿರುವ ನಟರಾಜನ್ ಗೆ ಮುಂದೆ 2021 ರ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ನೀಡುವ ಬಗ್ಗೆ ಕೊಹ್ಲಿ ಸುಳಿವು ನೀಡಿದ್ದಾರೆ. ನಟರಾಜನ್ ಭವಿಷ್ಯದಲ್ಲಿ ನಮಗೆ