ಕೋಲ್ಕೊತ್ತಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾನ್ಯವಾಗಿ ಮೈದಾನದಲ್ಲಿ ಆಕ್ರಮಣಕಾರಿಯಾಗಿರುತ್ತಾರೆ. ಎದುರಾಳಿಗಳ ಏಟಿಗೆ ತಿರುಗೇಟು ಕೊಡುತ್ತಾರೆ. ಆದರೆ ನಿನ್ನೆಯ ಪಂದ್ಯದಲ್ಲಿ ಮಾತ್ರ ನಗುತ್ತಲೇ ಎದುರಾಳಿಗಳ ಸದ್ದಡಗಿಸಿದ ಘಟನೆ ನಡೆದಿದೆ. ಆಸ್ಟ್ರೇಲಿಯಾ ಆಟಗಾರರು ಬ್ಯಾಟ್, ಬಾಲ್ ನಿಂದ ಆಟ ನಡೆಯದಿದ್ದರೆ, ಎದುರಾಳಿಗಳ ಮೇಲೆ ಸ್ಲೆಡ್ಜಿಂಗ್ ಅಸ್ತ್ರ ಪ್ರಯೋಗಿಸುತ್ತಾರೆ. ಅದರಲ್ಲೂ ಕೊಹ್ಲಿಯಂತಹ ಆಟಗಾರರು ಎದುರಾಳಿಗಳ ಸ್ಲೆಡ್ಜಿಂಗ್ ಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ನಿನ್ನೆ ಮಾತ್ರ ಕೊಹ್ಲಿ ಸೈಲಂಟಾಗಿಯೇ ಎದುರಾಳಿಯ