ಶ್ರಾದ್ಧೂಲ್-ಸುಂದರ್ ಬ್ಯಾಟಿಂಗ್ ಗೆ ಕೊಹ್ಲಿ ಫಿದಾ

ಬ್ರಿಸ್ಬೇನ್| Krishnaveni K| Last Modified ಸೋಮವಾರ, 18 ಜನವರಿ 2021 (07:39 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಘಟಾನುಘಟಿಗಳು ಸರಣಿಯಿಂದ ಹೊರಗುಳಿದ ಮೇಲೆ ಬಾಲಂಗೋಚಿಗಳೇ ತಂಡಕ್ಕೆ ಆಧಾರವಾಗಿದ್ದಾರೆ.

 
ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ನೆಲಕಚ್ಚಿ ನಿಂತು ತಂಡವನ್ನು ಕಾಪಾಡುತ್ತಿದೆ. ಮೂರನೇ ಟೆಸ್ಟ್ ನಲ್ಲೂ ಇದೇ ಆಗಿತ್ತು. ಇದೀಗ ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಮುಂದುವರಿದಿದೆ. ಮೊದಲ ಇನಿಂಗ್ಸ್ ನಲ್ಲಿ ಬೇಗನೇ ಆಲೌಟ್ ಆಗುವ ಭೀತಿಯಲ್ಲಿದ್ದ ಭಾರತಕ್ಕೆ ಆಸರೆಯಾಗಿದ್ದು ಕೆಳ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಶ್ರಾದ್ಧೂಲ್ ಠಾಕೂರ್. ಬೌಲರ್ ಗಳಾಗಿದ್ದರೂ ಭರ್ಜರಿ ಬ್ಯಾಟಿಂಗ್ ನಡೆಸಿದ ಇವರ ಪರಾಕ್ರಮವನ್ನು ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಹೊಗಳಿದ್ದಾರೆ. ಇದುವೇ ಟೆಸ್ಟ್ ಕ್ರಿಕೆಟ್ ನ ಸೌಂದರ್ಯ ಎಂದು ಹೊಗಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :