ಮುಂಬೈ: ತಮ್ಮ ಅನುಪಸ್ಥಿತಿಯಲ್ಲೂ ಟೀಂ ಇಂಡಿಯಾ ಆಟಗಾರರ ಪ್ರದರ್ಶನ ಕಂಡು ನಾಯಕ ವಿರಾಟ್ ಕೊಹ್ಲಿ ಖುಷಿಯಾಗಿದ್ದಾರೆ. ದ್ವಿತೀಯ ಟೆಸ್ಟ್ ನ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದಕ್ಕೆ ಖುಷಿಯಾಗಿರುವ ವಿರಾಟ್ ಕೊಹ್ಲಿ, ಈ ಖುಷಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ‘ಮೊದಲ ದಿನ ನಮ್ಮ ಮೇಲುಗೈ. ನಮ್ಮ ಬೌಲರ್ ಗಳದ್ದು ಟಾಪ್ ಕ್ಲಾಸ್ ಪ್ರದರ್ಶನ ಮತ್ತು ಫಿನಿಶಿಂಗ್ ಕೂಡಾ ಉತ್ತಮವಾಗಿತ್ತು’ ಎಂದು ಕೊಹ್ಲಿ ಖುಷಿ ಹಂಚಿಕೊಂಡಿದ್ದಾರೆ. ಪಿತೃತ್ವ ರಜೆ ಪಡೆದಿರುವ