ನವದೆಹಲಿ: ಗುರುವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿವೇಗದ 23 ಸಾವಿರ ರನ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಕ್ರವಾರ ಮೈದಾನದ ಹೊರಗೂ ದಾಖಲೆಯೊಂದನ್ನು ನಿರ್ಮಿಸಿದರು. ಇನ್ಸ್ಟಾಗ್ರಾಂನಲ್ಲಿ 150 ದಶಲಕ್ಷ ಹಿಂಬಾಲಕರನ್ನು ಸಂಪಾದಿಸಿದ ಭಾರತ ಮತ್ತು ಏಷ್ಯಾದ ಮೊದಲಿಗರೆಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಜತೆಗೆ ಈ ಸಾಧನೆ ಮಾಡಿದ ವಿಶ್ವದ 4ನೇ ಕ್ರೀಡಾಪಟು ಎನಿಸಿದರು. ಫುಟ್ಬಾಲ್ ತಾರೆಯರಾದ ಕ್ರಿಶ್ಚಿಯಾನೊ ರೊನಾಲ್ಡೊ (337 ದಶಲಕ್ಷ), ಲಿಯೋನೆಲ್ ಮೆಸ್ಸಿ (260 ದಶಲಕ್ಷ),