ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಅಂತಿಮ ಟಿ20 ಪಂದ್ಯ ನಡೆಯಲಿದ್ದು, ರನ್ ಮಿಷನ್ ವಿರಾಟ್ ಕೊಹ್ಲಿಗೆ ಹೊಸ ದಾಖಲೆ ಮಾಡುವ ಅವಕಾಶ ಎದುರಾಗಿದೆ. ಒಂದು ದ್ವಿಪಕ್ಷೀಯ ಸರಣಿಯಲ್ಲಿ 2 ನೇ ಗರಿಷ್ಠ ರನ್ ಗಳಿಸಿದ ಸರ್ ಡೊನಾಲ್ಡ್ ಬ್ರಾಡ್ಮನ್ ದಾಖಲೆ ಮುರಿಯಲು ಕೊಹ್ಲಿಗೆ ಅವಕಾಶವಿದೆ. ಆದರೆ ಇದಕ್ಕೆ ಅವರು ಶತಕ ಸಿಡಿಸಬೇಕು. ಬ್ರಾಡ್ಮನ್ 70 ರ ದಶಕದಲ್ಲಿ ಒಂದೇ ಸರಣಿಯಲ್ಲಿ 974 ರನ್ ಗಳಿಸಿದ್ದರು.