ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಗೆ ಹೆಸರುವಾಸಿ. ತಮ್ಮನ್ನು ಮಾತಿನಲ್ಲಿ ಕೆಣಕಿದವರನ್ನು ಸುಮ್ಮನೇ ಬಿಡುವ ಜಾಯಮಾನದವರಲ್ಲ.ಆದರೆ ಕೊಹ್ಲಿಯ ಈ ಸ್ವಭಾವವನ್ನು ದ.ಆಫ್ರಿಕಾ ವೇಗಿ ಕಗಿಸೊ ರಬಾಡ ಅಪ್ರಬುದ್ಧ ನಡವಳಿಕೆ ಎಂದಿದ್ದಾರೆ. ಒಂದು ವೇಳೆ ಸ್ಲೆಡ್ಜಿಂಗ್ ಗೆ ತಿರುಗೇಟು ಕೊಟ್ಟರೆ ಅದನ್ನು ಎದುರಿಸುವ ಪ್ರಬುದ್ಧತೆ ಕೊಹ್ಲಿಗೆ ಇಲ್ಲ ಎಂದು ರಬಡಾ ಅಭಿಪ್ರಾಯಪಟ್ಟಿದ್ದಾರೆ.ಹಿಂದಿನ ಘಟನೆಯೊಂದನ್ನು ಉದಾಹರಣೆಯಾಗಿ ನೀಡಿದ ರಬಾಡ ಅವರು ನನ್ನ ಬೌಲಿಂಗ್ ನಲ್ಲಿ ಬೌಂಡರಿ ಗಳಿಸಿದ