ಡೆಲ್ಲಿ ಪರ ದೇಶೀಯ ಕ್ರಿಕೆಟ್ ಆಡ್ತಾರಾ ವಿರಾಟ್ ಕೊಹ್ಲಿ?

ನವದೆಹಲಿ| Krishnaveni K| Last Modified ಮಂಗಳವಾರ, 3 ಸೆಪ್ಟಂಬರ್ 2019 (09:21 IST)
ನವದೆಹಲಿ: ಟೀಂ ಇಂಡಿಯಾ ನಾಯಕರಾದ ಮೇಲೆ ಬ್ಯುಸಿಯಾಗಿರುವ ವಿರಾಟ್ ಕೊಹ್ಲಿ ಇದೀಗ ತಮ್ಮ ತವರು ದೆಹಲಿಯ ವಿಜಯ್ ಹಜಾರೆ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

 
ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೇ ಬಿಡುವಿಲ್ಲದೇ ಆಡುತ್ತಿರುವ ಕೊಹ್ಲಿ ದೇಶೀಯ ಪಂದ್ಯದಲ್ಲೂ ಆಡುವುದು ಅನುಮಾನ. ಹಾಗಿದ್ದರೂ ಈ ಸಾಲಿನ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ತಂಡ ಘೋಷಣೆ ಮಾಡಿರುವ ದೆಹಲಿ ಕ್ರಿಕೆಟ್ ಸಂಸ್ಥೆ ತನ್ನ ತವರಿನ ಸ್ಟಾರ್ ಆಟಗಾರರನ್ನೂ ಸೇರಿಸಿಕೊಂಡಿದೆ.
 
ವಿರಾಟ್ ಕೊಹ್ಲಿ ಜತೆಗೆ ಶಿಖರ್ ಧವನ್, ರಿಷಬ್ ಪಂತ್ ಮತ್ತು ನವ್ ದೀಪ್ ಸೈನಿ ಹೆಸರು ಸೇರ್ಪಡೆಯಾಗಿದ್ದಾರೆ. ಆದರೆ ಟೀಂ ಇಂಡಿಯಾದಲ್ಲಿ ಬ್ಯುಸಿಯಾಗಿರುವ ಇವರು ದೇಶೀಯ ಪಂದ್ಯವಾಡುತ್ತಾರಾ ಎಂದು ಕಾದುನೋಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :