ಮೂರು ವಿಶ್ವ ದಾಖಲೆ ಮಾಡುವ ಹೊಸ್ತಿಲಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಗಯಾನ, ಗುರುವಾರ, 8 ಆಗಸ್ಟ್ 2019 (10:54 IST)

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರು ದಾಖಲೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.


 
ವೆಸ್ಟ್‍ ‍ಇಂಡೀಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಅವಕಾಶ ಸಿಕ್ಕಿದೆ. ಮಿಯಾಂದಾದ್ ವಿಂಡೀಸ್ ವಿರುದ್ಧ 1930 ರನ್ ಗಳಿಸಿದ್ದರು. ಕೊಹ್ಲಿಗೆ ಈ ದಾಖಲೆ ಮುರಿಯಲು 19 ರನ್ ಸಾಕು.
 
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯಲ್ಲಿ ಗರಿಷ್ಠ ಏಕದಿನ ರನ್ ಗಳಿಸಿದ ಸಾಧನೆ ವಿಂಡೀಸ್ ನ ರಾಮ್ ನರೇಶ್ ಸರ್ವಾನ್ ಹೆಸರಲ್ಲಿದೆ. ಸರ್ವಾನ್ 700 ರನ್ ಮಾಡಿದ್ದರು. ಕೊಹ್ಲಿ ಸದ್ಯಕ್ಕೆ 556 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿಯೇ ಅಲ್ಲದಿದ್ದರೂ ಈ ಸರಣಿಯಲ್ಲಿ ಆ ದಾಖಲೆ ಮುರಿಯುವ ಅವಕಾಶ ಕೊಹ್ಲಿಗಿದೆ.
 
ಇನ್ನು ಉಭಯ ದೇಶಗಳ ನಡುವಿನ ಏಕದಿನ ಸರಣಿಯಲ್ಲಿ ತಲಾ ಎರಡು ಶತಕಗಳೊಂದಿಗೆ ಕೊಹ್ಲಿ ಹಾಗೂ ವಿಂಡೀಸ್ ನ ಡೆಸ್ಮಂಡ್ ಹೇಯ್ನ್ ದಾಖಲೆ ಹಂಚಿಕೊಂಡಿದ್ದಾರೆ. ಕೊಹ್ಲಿಗೆ ಅದನ್ನು ಮುರಿಯಲು ಅವಕಾಶವಿದೆ. ಹೀಗಾಗಿ ಒಟ್ಟು ಮೂರು ವಿಶ್ವ ದಾಖಲೆಗಳು ಕೊಹ್ಲಿಯ ಮುಂದಿವೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮೂರು ವಿಶ್ವ ದಾಖಲೆ ಮಾಡುವ ಹೊಸ್ತಿಲಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ನಾಯಕ ...

news

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ಇಂದಿನಿಂದ

ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದೆ. ಇಂದು ಮೊದಲ ಪಂದ್ಯ ...

news

ದ್ರಾವಿಡ್ ಗೇ ನೋಟಿಸ್ ಕೊಡ್ತೀರಾ? ಭಾರತೀಯ ಕ್ರಿಕೆಟ್ ನ್ನು ದೇವರೇ ಕಾಪಾಡಬೇಕು! ಬಿಸಿಸಿಐಗೆ ಗಂಗೂಲಿ ಲೇವಡಿ

ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಪ್ರಮುಖ ಕ್ರಿಕೆಟಿಗರು ಸ್ವ ಹಿತಾಸಕ್ತಿ ಸಂಘರ್ಷ ವಿವಾದಕ್ಕೆ ...

news

ವಾಲಿಬಾಲ್ ಆಯ್ತು, ಈಗ ಯೋಧರಿಗಾಗಿ ಧೋನಿ ಹಾಡು

ನವದೆಹಲಿ: ಭಾರತೀಯ ಸೇನೆಯಲ್ಲಿ ಕೆಲವು ದಿನಗಳ ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಧೋನಿ ಮೊನ್ನೆಯಷ್ಟೇ ...