ವಿಶ್ವಕಪ್ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾಗೆ ಬಿಗ್ ಶಾಕ್! ವಿರಾಟ್ ಕೊಹ್ಲಿ ಸ್ಥಿತಿ ಏನಾಗಿದೆ ಗೊತ್ತಾ?

ಲಂಡನ್| Krishnaveni K| Last Modified ಸೋಮವಾರ, 3 ಜೂನ್ 2019 (09:34 IST)
ಲಂಡನ್: ದ.ಆಫ್ರಿಕಾ ವಿರುದ್ಧ ವಿಶ್ವಕಪ್ ಕೂಟದ ಮೊದಲ ಪಂದ್ಯವಾಡುವ ಮೊದಲು ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ರೂಪದಲ್ಲಿ ಆತಂಕ ಎದುರಾಗಿದೆ.

 
ವಿರಾಟ್ ಕೊಹ್ಲಿ ಅಭ್ಯಾಸದ ವೇಳೆ ಕೈ ಬೆರಳಿಗೆ ಗಾಯಮಾಡಿಕೊಂಡಿದ್ದಾರೆ. ಕೂಡಲೇ ಅಭ್ಯಾಸ ಮೊಟಕುಗೊಳಿಸಿ ಕೊಹ್ಲಿ ಪೆವಿಲಿಯನ್ ಗೆ ಮರಳಿದ್ದಾರೆ. ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್ ಬಳಿಕ ಇದೀಗ ಕೊಹ್ಲಿ ಅಭ್ಯಾಸದ ವೇಳೆ ಗಾಯ ಮಾಡಿಕೊಂಡಿದ್ದಾರೆ.
 
ಹಾಗಿದ್ದರೂ ಕೊಹ್ಲಿ ಗಾಯ ಗಂಭೀರವಲ್ಲ ಎಂದು ತಂಡದ ಮ್ಯಾನೇಜ್ ಮೆಂಟ್ ಪ್ರಕಟಣೆ ತಿಳಿಸಿದೆ. ದ.ಆಫ್ರಿಕಾ ವಿರುದ್ಧದ ಪಂದ್ಯದ ವೇಳೆಗೆ ಅವರು ಫಿಟ್ ಆಗಲಿದ್ದಾರೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :