ಮುಂಬೈ: ಲಾಕ್ ಡೌನ್ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಹ ಕ್ರಿಕೆಟಿಗರೊಂದಿಗೆ ಲೈವ್ ಚ್ಯಾಟ್ ಸೇರಿದಂತೆ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರು.ಈ ಸಮಯದಲ್ಲಿ ಅವರು ಇನ್ ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಜಗತ್ತಿನ ಟಾಪ್ 10 ವ್ಯಕ್ತಿಗಳ ಪೈಕಿ ಆರನೇ ಸ್ಥಾನ ಪಡೆದಿದ್ದಾರೆ. ಭಾರತೀಯರ ಪೈಕಿ ಕೊಹ್ಲಿ ನಂ.1 ಸ್ಥಾನ ಗಳಿಸಿದ್ದಾರೆ.ಕೊಹ್ಲಿ ಇನ್ ಸ್ಟಾಗ್ರಾಂ ಪೋಸ್ಟ್ ಗಳಿಂದ 379, 294 ಪೌಂಡ್ ಗಳಿಕೆ ಮಾಡಿದ್ದಾರೆ ಎನ್ನಲಾಗಿದೆ.