ನವದೆಹಲಿ: ಪ್ರಸಕ್ತ ಕ್ರಿಕೆಟ್ ಆಡುತ್ತಿರುವ ಆಟಗಾರರ ಪೈಕಿ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಜೋ ರೂಟ್ ವಿಶ್ವವ ಕ್ರಿಕೆಟ್ ನ ಅದ್ಭುತ ಆಟಗಾರರು. ಸಮಕಾಲೀನ ಆಟಗಾರರು ಪರಸ್ಪರ ಮೆಚ್ಚಿಕೊಳ್ಳುವುದು ತುಂಬಾ ವಿರಳ. ಆದರೆ ಕೊಹ್ಲಿ ಮಾತ್ರ ಈ ವಿಷಯದಲ್ಲಿ ಎಲ್ಲಾ ಹುಳುಕುಗಳನ್ನೂ ಮೀರಿದ್ದಾರೆ.ಸಮಕಾಲೀನ ಆಟಗಾರರ ಪೈಕಿ ನಿಮ್ಮ ಮೆಚ್ಚಿನ ಆಟಗಾರ ಯಾರು ಎಂಬ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಪ್ರಾಮಾಣಿಕವಾಗಿ ಉತ್ತರಿಸಿದ ಕೊಹ್ಲಿ ಇಂಗ್ಲೆಂಡ್ ತಂಡದ ಜೋ ರೂಟ್ ಹೆಸರು ಹೇಳಿದ್ದಾರೆ.