ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲವ್ಲೀ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್ ಪಿಯು) ಬಗ್ಗೆ ನೀಡಿದ ಜಾಹೀರಾತೊಂದು ಈಗ ವಿವಾದಕ್ಕೆ ಕಾರಣವಾಗಿದೆ.ಕೊಹ್ಲಿ ತಮ್ಮ ಎಲ್ಲಾ ಸೋಷಿಯಲ್ ಮೀಡಿಯಾ ಪುಟಗಳಲ್ಲಿ ಎಲ್ ಪಿಯು ಒಲಿಂಪಿಕ್ಸ್ ಗೆ 11 ಜನ ಆಟಗಾರರನ್ನು ತಯಾರಿಸಿ ಕಳುಹಿಸಿರುವುದಾಗಿ ಹೊಗಳಿ ಬರೆದಿದ್ದರು. ಇದನ್ನು ಪೋಸ್ಟ್ ಮಾಡುವಾಗ ಪ್ರಮೋಷನಲ್ ಆಕ್ಟಿವಿಟಿ ಎಂದು ಟ್ಯಾಗ್ ಮಾಡಿಲ್ಲ. ಇದರಿಂದಾಗಿ ಅವರೀಗ ಸಂಕಷ್ಟಕ್ಕೀಡಾಗಿದ್ದಾರೆ.ಇದು ನಿಯಮಗಳ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕೊಹ್ಲಿಗೆ ನೋಟಿಸ್