ವಾಂಡರರ್ಸ್: ಭಾರತ ಮತ್ತು ದ.ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣರಾದರು. ಫೀಲ್ಡಿಂಗ್ ಮಾಡುತ್ತಿದ್ದಾಗ ಸೊಂಟ ಹಿಡಿದುಕೊಂಡು ಕೊಹ್ಲಿ ಪೆವಿಲಿಯನ್ ಗೆ ಮರಳಿ ಟ್ರೀಟ್ ಮೆಂಟ್ ಪಡೆಯುತ್ತಿದ್ದುದು ನೋಡಿ ಅಭಿಮಾನಿಗಳಿಗೆ ಆತಂಕವಾಗಿತ್ತು.ಈ ಬಗ್ಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ ಬ್ಯಾಟಿಂಗ್ ಮಾಡುವಾಗಲೇ ನನಗೆ ಪೃಷ್ಠದ ಭಾಗಕ್ಕೆ ಗಾಯವಾಗಿತ್ತು. ಆದರೆ ಕಿಬ್ಬೊಟ್ಟೆಗೆ ಬಲವಾದ ಏಟು ಬಿದ್ದಿರಲಿಲ್ಲ.