ಬೆಂಗಳೂರು: ಸ್ವಭಾವತಃ ಆಕ್ರಮಣಕಾರಿಯಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಶಾಂತಗೊಳಿಸಲು ಡ್ರೆಸ್ಸಿಂಗ್ ರೂಂನಲ್ಲಿ ಕೂಲ್ ಮೆಂಟರ್ ಬೇಕು ಎಂದು ಆರ್ ಸಿಬಿ ಕೋಚ್ ಆಗಿದ್ದ ದ.ಆಫ್ರಿಕಾದ ರೇ ಜೆನ್ನಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ. ಧೋನಿ ನಾಯಕತ್ವದಿಂದ ಕೊಹ್ಲಿ ನಾಯಕತ್ವಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಧೋನಿ ಶಾಂತ ಸ್ವಭಾವದವರು. ಆದರೆ ಕೊಹ್ಲಿ ಉರಿಯುವ ಸೂರ್ಯನಂತೆ. ಅವರನ್ನು ಶಾಂತವಾಗಿರಿಸಲು ಒಬ್ಬರ ಸಹಾಯ ಬೇಕು. ಇದು ಸಾಧ್ಯವಾದರೆ ಮಾತ್ರ ಅವರು ಪರಿಪೂರ್ಣ ನಾಯಕನಾಗಲು ಸಾಧ್ಯ ಎಂದಿದ್ದಾರೆ.ಕೊಹ್ಲಿ