ನವದೆಹಲಿ: ವಿರಾಟ್ ಕೊಹ್ಲಿ ಎಂದರೆ ಜಾಗತಿಕ ಕ್ರಿಕೆಟ್ ಗುರುತಿಸಿಕೊಂಡ ಪ್ರತಿಭೆ. ಆದರೆ ಅವರ ತವರು ಕ್ರಿಕೆಟ್ ಸಂಸ್ಥೆಯೇ ಕೊಹ್ಲಿಯನ್ನು ಕಡೆಗಣಿಸಿದೆ ಎಂದರೆ ನೀವು ನಂಬಲೇ ಬೇಕು. ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕೆಲವು ಕ್ರಿಕೆಟರುಗಳ ಫೋಟೋ ಗೌರವಾರ್ಥವಾಗಿ ಹಾಕಲಾಗಿದೆ. ಆದರೆ ಇದೇ ಕ್ರಿಕೆಟ್ ಸಂಸ್ಥೆಯಿಂದ ಹೊರಹೊಮ್ಮಿದ ಜಾಗತಿಕ ಪ್ರತಿಭೆ ಕೊಹ್ಲಿ ಫೋಟೋವೇ ಇಲ್ಲ.ಕೋಟ್ಲಾ ಮೈದಾನದಲ್ಲಿ ಹಿರಿಯ ಕ್ರಿಕೆಟಿಗರಿಗೆ ಗೌರವವೇ ಇಲ್ಲ ಎಂದು ಮಾಜಿ ಕ್ರಿಕೆಟಿಗ ಮೊಹಿಂದರ್ ಅಮರನಾಥ್