ರೋಹಿತ್ ಜತೆ ರಗಳೆ: ವಿಂಡೀಸ್ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಗೇ ಬರಲ್ವಂತೆ ವಿರಾಟ್ ಕೊಹ್ಲಿ

ಮುಂಬೈ| Krishnaveni K| Last Modified ಭಾನುವಾರ, 28 ಜುಲೈ 2019 (09:45 IST)
ಮುಂಬೈ: ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಜತೆ ವೈಮನಸ್ಯದ ವದಂತಿಗಳ ಹಿನ್ನಲೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಗೇ ಬರದಿರಲು ತೀರ್ಮಾನಿಸಿದ್ದಾರಂತೆ.

 
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಾಗಿ ಟೀಂ ಇಂಡಿಯಾ ಕರೆಬಬಿಯನ್ನರ ನಾಡಿಗೆ ತೆರಳಲಿದೆ. ಸಾಮಾನ್ಯವಾಗಿ ಇಂತಹ ಸುದೀರ್ಘ ಪ್ರವಾಸಕ್ಕೆ ಮೊದಲು ಟೀಂ ಇಂಡಿಯಾ ನಾಯಕ ಮತ್ತು ಕೋಚ್ ಪತ್ರಿಕಾಗೋಷ್ಠಿ ನಡೆಸುವುದು ಸಾಮಾನ್ಯ.
 
ಆದರೆ ಈಗ ಪತ್ರಿಕಾಗೋಷ್ಠಿ ನಡೆಸಿದರೆ ಪತ್ರಕರ್ತರು ರೋಹಿತ್ ಶರ್ಮಾ ಜತೆಗಿನ ವೈಮನಸ್ಯದ ಬಗ್ಗೆ ಪ್ರಶ್ನೆ ಮಾಡಿಯೇ ಮಾಡುತ್ತಾರೆ. ಹೀಗಾಗಿ ಇದರಿಂದ ತಪ್ಪಿಸಿಕೊಳ್ಳಲು ಕೊಹ್ಲಿ ಯಾವುದೇ ಸುದ್ದಿಗೋಷ್ಠಿ ನಡೆಸದಿರಲು ತೀರ್ಮಾನಿಸಿದ್ದಾರಂತೆ.
ಇದರಲ್ಲಿ ಇನ್ನಷ್ಟು ಓದಿ :