ಮುಂಬೈ: ಕೊರೋನಾ ಕಾರಣದಿಂದಾಗಿ ಕ್ರಿಕೆಟಿಗರು ಸದಾ ಬಯೋ ಬಬಲ್ (ಜೈವ ಸುರಕ್ಷಾ ವಲಯ)ನಲ್ಲಿರುವಂತಾಗಿದೆ. ಆದರೆ ಇದರಿಂದ ಕ್ರಿಕೆಟಿಗರಿಗೆ ಆಗುತ್ತಿರುವ ಹಿಂಸೆ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.‘ಮುಂದಿನ ದಿನಗಳಲ್ಲಾದರೂ ವೇಳಾಪಟ್ಟಿ ನಿಗದಿಪಡಿಸುವಾಗ ಗಮನಿಸಬೇಕು. ಒಂದೆರಡು ತಿಂಗಳು ಬಯೋ ಬಬಲ್ ವಾತಾವರಣದಲ್ಲಿರುವುದು ಕಷ್ಟವಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಕಷ್ಟವಾಗಬಹುದು. ಯಾಕೆಂದರೆ ಎಲ್ಲರೂ ಗಟ್ಟಿ ಮನಸ್ಸಿನವರಾಗಿರಬೇಕು ಎಂದೇನಿಲ್ಲ. ಇದು ಕ್ರಿಕೆಟಿಗರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲವೊಮ್ಮೆ