ನಾನು ಒಂದು ಫೋಟೋ ಹಾಕಿದ್ದಕ್ಕೇ ಧೋನಿ ನಿವೃತ್ತಿ ಬಗ್ಗೆ ರೂಮರ್ ಹಬ್ಬಿಸಿದ್ರಲ್ಲಾ ಎಂದ ವಿರಾಟ್ ಕೊಹ್ಲಿ

ಧರ್ಮಶಾಲಾ, ಭಾನುವಾರ, 15 ಸೆಪ್ಟಂಬರ್ 2019 (08:53 IST)

ಧರ್ಮಶಾಲಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಧೋನಿ ಜತೆಗಿನ ಹಳೆಯ ಪಂದ್ಯವೊಂದರ ಗೆಲುವಿನ ಕ್ಷಣಗಳ ಫೋಟೋ ಅಪ್ ಲೋಡ್ ಮಾಡಿದ್ದಕ್ಕೇ ಧೋನಿ ನಿವೃತ್ತಿಯಾಗ್ತಾರೆ ಎಂದು ಕೆಲವರು ಸುದ್ದಿ ಹಬ್ಬಿಸಿ ಬಿಟ್ಟರು.
 


ಈ ಬಗ್ಗೆ ಈಗ ಸ್ವತಃ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಸುದ್ದಿ ಹೊರಬಿದ್ದ ತಕ್ಷಣ ಕೆಲವರು ಧೋನಿ ನಿವೃತ್ತಿಯಾಗುತ್ತಿರುವುದಕ್ಕೆ ವಿರಾಟ್ ಸುಳಿವು ಕೊಟ್ಟರು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಸುದ್ದಿ ಹಬ್ಬುತ್ತಿದ್ದ ಧೋನಿ ಪತ್ನಿ ಸಾಕ್ಷಿ ಇದೆಲ್ಲಾ ಸುಳ್ಳು ಸುದ್ದಿ ಎಂದು ಅಲ್ಲಗಳೆದರು.
 
ಇದೀಗ ದ.ಆಫ್ರಿಕಾ ಸರಣಿಗೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ನಾನು ಮನೆಯಲ್ಲಿ ಕೂತಿದ್ದಾಗ ಸುಮ್ಮನೇ ಒಂದು ಹಳೆಯ ಫೋಟೋ ಅಪ್ ಲೋಡ್ ಮಾಡಿದೆ ಅಷ್ಟೇ. ಅದುವೇ ಸುದ್ದಿಯಾಗಿಬಿಟ್ಟಿತು. ಹೀಗಾಗಿ ಇದು ನನಗೊಂದು ಪಾಠ ಕಲಿಸಿತು. ನಾನು ಏನು ಆಲೋಚನೆ ಮಾಡುತ್ತೇನೋ ಅದನ್ನೇ ಜಗತ್ತೂ ಯೋಚಿಸಬೇಕೆಂದಿಲ್ಲ ಎಂದು ಅರ್ಥ ಮಾಡಿಕೊಂಡೆ.  ಆ ಪಂದ್ಯ ನನಗೆ ವಿಶೇಷವಾಗಿತ್ತು. ಅದನ್ನು ನಾನು ಎಲ್ಲೂ ಹೇಳಿಕೊಂಡಿರಲಿಲ್ಲ. ಅದಕ್ಕೇ ಫೋಟೋ ಹಾಕಿದೆ. ಆದರೆ ಜನ ಅದನ್ನು ಬೇರೇ ರೀತಿಯಲ್ಲಿ ಅರ್ಥೈಸಿದರು’ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ-ದ.ಆಫ್ರಿಕಾ ಟಿ20 ಮೊದಲ ಪಂದ್ಯ: ಎಲ್ಲಿ, ಯಾವಾಗ ವೀಕ್ಷಿಸಬೇಕು?

ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಮೊದಲ ...

news

ಧರ್ಮಶಾಲಾಗೆ ಬಂದಿಳಿದ ಟೀಂ ಇಂಡಿಯಾ

ಧರ್ಮಶಾಲಾ: ದ.ಆಫ್ರಿಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯವಾಡಲು ಟೀಂ ಇಂಡಿಯಾ ನಿನ್ನೆಯೇ ಧರ್ಮಶಾಲಾಗೆ ...

news

ಚೆಂಡು ಬಡಿದು ಕೂದಲೆಳೆಯಲ್ಲಿ ಸಾವು ತಪ್ಪಿಸಿಕೊಂಡ ವಿಂಡೀಸ್ ಕ್ರಿಕೆಟಿಗ ಆಂಡ್ರೆ ರಸೆಲ್

ಕಿಂಗ್ ಸ್ಟನ್: ವೆಸ್ಟ್ ಇಂಡೀಸ್ ನ ಪ್ರಮುಖ ಕ್ರಿಕೆಟಿಗ ಆಂಡ್ರೆ ರಸೆಲ್ ಸಿಪಿಎಲ್ ಟಿ20 ಪಂದ್ಯದ ವೇಳೆ ಭಾರೀ ...

news

ನಾಳೆಯಿಂದ ಭಾರತ-ದ.ಆಫ್ರಿಕಾ ಟಿ20: ಕೊಹ್ಲಿ-ರೋಹಿತ್ ಶರ್ಮಾ ಪೈಪೋಟಿ ಈಗ ಮೈದಾನದಲ್ಲಿ!

ಧರ್ಮಶಾಲಾ: ಭಾರತ ಮತ್ತು ದ.ಆಫ್ರಿಕಾ ನಡುವೆ ನಾಳೆಯಿಂದ ಟಿ20 ಸರಣಿ ಆರಂಭವಾಗಲಿದ್ದು, ಧರ್ಮಶಾಲಾದಲ್ಲಿ ಮೊದಲ ...