ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಬದಲಾದ ಜೀವನ ಶೈಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮೂಲಕ ಬರೆದುಕೊಂಡಿದ್ದಾರೆ.ಈ ದಶಕದ ಆರಂಭದಲ್ಲಿ ತಮ್ಮ ಜೀವನ ಶೈಲಿ ಹೇಗಿತ್ತು ಈಗ ಹೇಗಾಗಿದೆ ಎಂದು ಒಂದೇ ಫೋಟೋ ಪ್ರಕಟಿಸಿ ಕೊಹ್ಲಿ ಹೇಳಿಕೊಂಡಿದ್ದಾರೆ.ದಶಕದ ಆರಂಭದಲ್ಲಿ ಚಪ್ಪಲಿ ಹಾಕ್ತಾ ಇದ್ದೆ. ಈಗ ಬ್ರಾಂಡೆಡ್ ಶೂ ಬಂದಿದೆ ಎಂದು ಕೈಯಲ್ಲಿ ಚಪ್ಪಲಿ ಹಿಡಿದಿರುವ ಹಳೇ ಫೋಟೋ ಮತ್ತು ಶೂ ಹಿಡಿದಿರುವ ಇತ್ತೀಚೆಗಿನ ಭಾವಚಿತ್ರ ಪ್ರಕಟಿಸಿದ್ದಾರೆ.