ರೋಹಿತ್ ಶರ್ಮಾ ಜತೆಗಿನ ರಗಳೆ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಮುಂಬೈ| Krishnaveni K| Last Modified ಮಂಗಳವಾರ, 30 ಜುಲೈ 2019 (09:38 IST)
ಮುಂಬೈ: ಟೀಂ ಇಂಡಿಯಾದಲ್ಲಿ ಉಪನಾಯಕ ರೋಹಿತ್ ಶರ್ಮಾ ಜತೆಗೆ ತಮ್ಮ ಸಂಬಂಧ ಹಳಸಿದೆ ಎಂಬ ವದಂತಿಗಳ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

 
ವೆಸ್ಟ್ ಇಂಡೀಸ್ ಸರಣಿಗೆ ಮೊದಲು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ಈ ಬಗ್ಗೆ ವಿರಾಟ್ ಸ್ಪಷ್ಟನೆ ನೀಡಿದ್ದಾರೆ. ಇಂತಹ ಸುದ್ದಿಗಳೆಲ್ಲಾ ಅಸಂಬದ್ಧ ಎಂದು ಕೊಹ್ಲಿ ಹಾಗೂ ಅವರ ಜತೆಗಿದ್ದ ಕೋಚ್ ರವಿಶಾಸ್ತ್ರಿ ಕೂಡಾ ಸ್ಪಷ್ಟನೆ ನೀಡಿದ್ದಾರೆ.
 
‘ಕಳೆದ ಕೆಲವು ದಿನಗಳಿಂದ ನಾನೂ ಇಂತಹ ಅನೇಕ ಸುದ್ದಿಗಳನ್ನು ನೋಡುತ್ತಲೇ ಇದ್ದೇನೆ. ನನ್ನ ಮತ್ತು ರೋಹಿತ್ ನಡುವೆ ಯಾವುದೇ ತಕರಾರುಗಳಿಲ್ಲ. ಒಂದು ವೇಳೆ ಇದ್ದಿದ್ದರೆ ಅದು ನನ್ನ ಮುಖದಲ್ಲಿ ಕಾಣುತ್ತಿತ್ತು. ತಂಡದ ವಾತಾವರಣ ಸರಿಯಾಗಿಲ್ಲದೇ ಇದ್ದಿದ್ದರೆ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ವರದಿಗಳೆಲ್ಲಾ ನಮ್ಮನ್ನು ದಿಗ್ಬ್ರಮೆಗೊಳಿಸುತ್ತದೆ. ಇದನ್ನು ಓದುವುದೂ ಮೂರ್ಖತನವಾಗುತ್ತದೆ’ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ. ಕೊಹ್ಲಿ ಮಾತಿಗೆ ಕೋಚ್ ರವಿಶಾಸ್ತ್ರಿ ಕೂಡಾ ಅನುಮೋದನೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :