Widgets Magazine

ವಿರಾಟ್ ಕೊಹ್ಲಿ ಯಾಕೆ ಬೌಲಿಂಗ್ ಮಾಡಲ್ಲ? ಕಾರಣ ಜಸ್ಪ್ರೀತ್ ಬುಮ್ರಾ?!

ಮುಂಬೈ| Krishnaveni K| Last Modified ಮಂಗಳವಾರ, 4 ಜೂನ್ 2019 (09:22 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೂಲಕ ಅದೆಷ್ಟೋ ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆದರೆ 2017 ರಿಂದೀಚೆಗೆ ಅವರು ಬೌಲಿಂಗ್ ಮಾಡಿಲ್ಲ. ಕಾರಣವೇನು ಗೊತ್ತಾ?

 
ಅದನ್ನು ಸ್ವತಃ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ. 2017 ರ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಇನ್ನೇನು ಪಂದ್ಯ ಮುಗಿಯಿತು ಎನ್ನುವಾಗ ಕೊಹ್ಲಿ ಆಗ ನಾಯಕರಾಗಿದ್ದ ಧೋನಿ ಬಳಿ ನಾನು ಬೌಲಿಂಗ್ ಮಾಡಲು ಅವಕಾಶ ಕೇಳಿದರಂತೆ.
 
ಅದರಂತೆ ಕೊಹ್ಲಿ ಬೌಲಿಂಗ್ ಮಾಡಲು ಹೊರಟಾಗ ಬೌಂಡರಿ ಗೆರೆ ಬಳಿಯಿದ್ದ ಬುಮ್ರಾ ‘ಇದೇನು ತಮಾಷೆಯಾ? ಇದು ಅಂತಾರಾಷ್ಟ್ರೀಯ ಪಂದ್ಯ’ ಎಂದು ಕೂಗಿ ತಮಾಷೆ ಮಾಡಿದರಂತೆ.
 
ಹಾಗಿದ್ದರೂ ಬೌಲಿಂಗ್ ಮಾಡಿದ ಕೊಹ್ಲಿಗೆ ಬಳಿಕ ಬೆನ್ನು ನೋವಿನ ಸಮಸ್ಯೆ ಕಾಡಿತಂತೆ. ಅದಾದ ಬಳಿಕ ನಾನು ಬೌಲಿಂಗ್ ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :