ವಿಶೇಷ ಹೊಡೆತವೊಂದನ್ನು ಅಭ್ಯಾಸ ಮಾಡುತ್ತಿರುವ ವಿರಾಟ್ ಕೊಹ್ಲಿ!

Pune| Krishnaveni K| Last Modified ಬುಧವಾರ, 18 ಜನವರಿ 2017 (08:45 IST)
ಪುಣೆ: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವಿಶಿಷ್ಟ ರೀತಿಯಲ್ಲಿ ಸಿಕ್ಸರ್ ಹೊಡೆದು ಸುದ್ದಿಯಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಏಕದಿನಕ್ಕೆ ಮೊದಲು ನೆಟ್ ಪ್ರಾಕ್ಟೀಸ್ ಮಾಡುವಾಗ ಹೊಸ ಹೊಡೆತವೊಂದನ್ನು ಅಭ್ಯಾಸ ಮಾಡುತ್ತಿದ್ದಾರೆ.
 
ಇದನ್ನು ನೀವು ಎರಡನೇ ಏಕದಿನ ಪಂದ್ಯದಲ್ಲಿ ನೋಡಬಹುದು. ಎರಡನೇ ಏಕದಿನಕ್ಕೆ ಮೊದಲು ನೆಟ್ ಪ್ರಾಕ್ಟೀಸ್ ಮಾಡುತ್ತಿರುವ ಕೊಹ್ಲಿ ಎಲ್ಲಾ ಬೌಲರ್ ಗಳನ್ನು ಎದುರಿಸುತ್ತಿದುದು ಕಂಡು ಬಂತು. ಅಲ್ಲದೆ ಬಿಡುಗಡೆಗೊಳಿಸಿದ ವಿಡಿಯೋದಲ್ಲಿ ಕೊಹ್ಲಿ ವಿಶೇಷ ಹೊಡೆತವೊಂದಕ್ಕೆ ಪ್ರಯತ್ನಿಸುತ್ತಿದ್ದರು.
 
ಮೊದಲ ಏಕದಿನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕೊಹ್ಲಿ ಇಲ್ಲೂ ಅದೇ ರೀತಿಯ ಮತ್ತೊಂದು ಇನಿಂಗ್ಸ್ ಕಟ್ಟಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅವರ ಬತ್ತಳಿಕೆಯ ಹೊಸ ಬಾಣ ಏನೆಂದು ತಿಳಿಯಬೇಕಾದರೆ ಗುರುವಾರದವರೆಗೆ ಕಾಯಲೇಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :