Widgets Magazine

ಸ್ಲೆಡ್ಜಿಂಗ್ ಬಳಿಕ ಸೂರ್ಯಕುಮಾರ್ ಯಾದವ್ ಗೆ ಅಚ್ಚರಿಕೊಟ್ಟಿದ್ದ ವಿರಾಟ್ ಕೊಹ್ಲಿ

ದುಬೈ| Krishnaveni K| Last Modified ಶನಿವಾರ, 21 ನವೆಂಬರ್ 2020 (10:19 IST)
ದುಬೈ: ರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಯುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ರನ್ನು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ್ದು ಭಾರೀ ಸುದ್ದಿಯಾಗಿತ್ತು.
Photo Credit: PTI

 
ಇಬ್ಬರ ನಡುವೆ ಆ ಬಳಿಕ ಶತ್ರುತ್ವ ಹುಟ್ಟಿಕೊಂಡಿತ್ತೇನೋ ಎಂಬಂತೆ ಸುದ್ದಿಗಳು ಪ್ರಸಾರವಾದವು. ಆದರೆ ಇದೀಗ ಸ್ವತಃ ಸಸೂರ್ಯಕುಮಾರ್ ಅಂದಿನ ಪಂದ್ಯದ ಬಳಿಕ ಕೊಹ್ಲಿ ತನಗೆ ಏನು ಹೇಳಿದ್ದರು ಎಂಬುದನ್ನು  ಬಹಿರಂಗಪಡಿಸಿದ್ದಾರೆ. ಆ ಪಂದ್ಯದ ಬಳಿಕ ಸ್ವತಃ ಕೊಹ್ಲಿಯೇ ನನ್ನ ಬಳಿ ಬಂದು ‘ಚೆನ್ನಾಗಿ ಆಡಿದೆ. ಗ್ರೇಟ್ ಇನಿಂಗ್ಸ್ ಮತ್ತು ನಿನ್ನ ಧೈರ್ಯ’ ಎಂದು ಬೆನ್ನುತಟ್ಟಿ ಅಭಿನಂದಿಸಿದ್ದರು. ಆ ಒಂದು ಕ್ಷಣದಲ್ಲಿ ಮಾತ್ರ ಆ ರೀತಿ ಪ್ರತಿಕ್ರಿಯಿಸಿದರೂ ಬಳಿಕ ಅವರು ನನ್ನ ಬಳಿ ನಾರ್ಮಲ್ ಆಗಿಯೇ ನಡೆದುಕೊಂಡರು ಎಂದು ಸೂರ್ಯಕುಮಾರ್ ಹೇಳಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :