ಭಾರತೀಯರ ಮೇಲೆ ಜನಾಂಗೀಯ ನಿಂದನೆ: ವಿರಾಟ್ ಕೊಹ್ಲಿ ಕಿಡಿ

ಸಿಡ್ನಿ| Krishnaveni K| Last Modified ಭಾನುವಾರ, 10 ಜನವರಿ 2021 (16:40 IST)
ಸಿಡ್ನಿ: ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ ಮಾಡುತ್ತಿರುವ ಆಸ್ಟ್ರೇಲಿಯಾ ಪ್ರೇಕ್ಷಕರ ವಿರುದ್ಧ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
ಪಿತೃತ್ವ ರಜೆಯಲ್ಲಿರುವ ವಿರಾಟ್ ಕೊಹ್ಲಿ ಟ್ವಿಟರ್ ಮೂಲಕ ಭಾರತೀಯ ಕ್ರಿಕೆಟಿಗರ ಮೇಲಿನ ಜನಾಂಗೀಯ ನಿಂದನೆಯ ವಿರುದ್ಧ ಕಿಡಿ ಕಾರಿದ್ದಾರೆ. ‘ಜನಾಂಗೀಯ ನಿಂದನೆ ಯಾವುದೇ ಕಾರಣಕ್ಕೂ ಸಹಿಸಲಾಗದು. ಬೌಂಡರಿ ಗೆರೆ ಬಳಿ ಹಲವಾರು ಬಾರಿ ಕೆಟ್ಟದಾಗಿ ಮಾಡಿರುವ ಕಾಮೆಂಟ್ ಗಳು ಒಂದು ರೀತಿಯಲ್ಲಿ ರೌಡಿಸಂ ವರ್ತನೆ. ಇದು ಮೈದಾನದಲ್ಲಿ ನಡೆದಿರುವುದು ತೀರಾ ಖೇದಕರ’ ಎಂದು ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :