ಮುಂಬೈ: ಭಾರತದ ಹಲವು ಕ್ರಿಕೆಟಿಗರ ಜೀವನಗಾಥೆ ಸಿನಿಮಾವಾಗಿ ಮೂಡಿಬಂದಿದೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಯಾರೂ ಇದುವರೆಗೆ ಸಿನಿಮಾ ಮಾಡಿಲ್ಲ. ಒಂದು ವೇಳೆ ತಮ್ಮ ಆತ್ಮಕತೆ ಸಿನಿಮಾವಾದರೆ ಅಲ್ಲಿ ನಾನೇ ನಾಯಕನಾಗಿ ನಟಿಸುತ್ತೇನೆ ಎಂದಿದ್ದಾರೆ ಕೊಹ್ಲಿ. ಆದರೆ ನಾಯಕಿ ಮಾತ್ರ ಅನುಷ್ಕಾ ಶರ್ಮಾ ಆಗಿರಬೇಕೆಂದು ಷರತ್ತು ವಿಧಿಸಿದ್ದಾರೆ.ಸುನಿಲ್ ಛೆಟ್ರಿ ಜತೆಗಿನ ಸಂವಾದದಲ್ಲಿ ಕೊಹ್ಲಿ ಹೀಗೊಂದು ಐಡಿಯಾ ಹೇಳಿದ್ದಾರೆ. ನನ್ನ ಪಾತ್ರವನ್ನು ನನ್ನ ಹೊರತಾಗಿ ಯಾರೂ ಮಾಡಲು