ದುಬೈ: 2018 ನೇ ಸಾಲಿನ ಐಸಿಸಿ ಪ್ರಶಸ್ತಿಯಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಪಡೆದು ಇತಿಹಾಸ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಗೌರವಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.ಐಸಿಸಿ ಟೆಸ್ಟ್, ಏಕದಿನ ಮತ್ತು ವರ್ಷದ ಕ್ರಿಕೆಟಿಗ ಪ್ರಶಸ್ತಿಯಲ್ಲದೆ ಟೆಸ್ಟ್ ಮತ್ತು ಏಕದಿನ ತಂಡಕ್ಕೂ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯಲ್ಲಿ ಸಿಂಹಪಾಲು ಪಡೆದ ಕೊಹ್ಲಿಯನ್ನು ಐಸಿಸಿ ಸೂಪರ್ ಸ್ಟಾರ್ ಎಂದು ಹೊಗಳಿದೆ.ಹ್ಯಾಟ್ರಿಕ್ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿರುವ ಕೊಹ್ಲಿ