ಧೋನಿ ಬಗ್ಗೆ ಗಂಗೂಲಿ ಮಾತನಾಡಿದ್ದಾರಾ ಎಂದಾಗ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು ಗೊತ್ತಾ?

ರಾಂಚಿ| Krishnaveni K| Last Modified ಬುಧವಾರ, 23 ಅಕ್ಟೋಬರ್ 2019 (09:19 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಮೂರನೇ ಟೆಸ್ಟ್ ಗೆದ್ದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುವಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನೂತನ ಬಿಸಿಸಿಐ ಅಧ್ಯಕ್ಷರಾಗಿ ನಿಯೋಜನೆಗೊಳ್ಳಲಿರುವ ಸೌರವ್ ಗಂಗೂಲಿ ಬಗ್ಗೆ ಪ್ರಶ್ನೆಗಳು ಎದುರಾದವು.

 
ಗಂಗೂಲಿ ಇತ್ತೀಚೆಗಷ್ಟೇ ಧೋನಿ ಭವಿಷ್ಯದ ಬಗ್ಗೆ ಕೊಹ್ಲಿ ಬಳಿಯೂ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಮಾಡುವುದಾಗಿ ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಕೊಹ್ಲಿ ಮೊದಲಿಗೆ ನಸು ನಕ್ಕರು. ಬಳಿಕ ಇದುವರೆಗೆ ಗಂಗೂಲಿ ನನ್ನ ಬಳಿ ಈ ಬಗ್ಗೆ ಕೇಳಿಲ್ಲ ಎಂದಿದ್ದಾರೆ.
 
‘ಮೊದಲನೆಯದಾಗಿ ಬಿಸಿಸಿಐ ಅಧ್ಯಕ್ಷರಾಗಿ ನಿಯೋಜನೆಗೊಳ್ಳುತ್ತಿರುವ ಗಂಗೂಲಿಗೆ ಅಭಿನಂದನೆಗಳು. ಅವರು ಇದುವರೆಗೆ ಧೋನಿ ವಿಚಾರವನ್ನು ನನ್ನ ಬಳಿ ಚರ್ಚಿಸಿಲ್ಲ. ಕರೆದಾಗ ನಾನು ಅವರ ಎದುರು ಹಾಜರಾಗಿ ನನ್ನ ಅಭಿಪ್ರಾಯ ತಿಳಿಸುವೆ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :