Widgets Magazine

ನನ್ನ ಬ್ಯಾಟಿಂಗ್ ನ ಮೊದಲಾರ್ಧವನ್ನು ಯಾರೂ ಅನುಕರಿಸಬೇಡಿ! ಹೀಗಂತ ಕೊಹ್ಲಿ ಹೇಳಿದ್ದೇಕೆ ಗೊತ್ತಾ?

ಹೈದರಾಬಾದ್| Krishnaveni K| Last Modified ಶನಿವಾರ, 7 ಡಿಸೆಂಬರ್ 2019 (09:45 IST)
ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 94 ರನ್ ಚಚ್ಚಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಾವು ಬೆಸ್ಟ್ ರನ್ ಚೇಸರ್ ಎಂದು ನಿರೂಪಿಸಿದ್ದಾರೆ.

 
ಆದರೆ ಈ ಇನಿಂಗ್ಸ್ ನ ಮೊದಲಾರ್ಧವನ್ನು ಯಾವುದೇ ಯುವ ಆಟಗಾರರೂ ಅನುಕರಿಸಲು ಹೋಗಬೇಡಿ ಎಂದು ಕೊಹ್ಲಿ ಪಂದ್ಯದ ನಂತರ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣವೇನೆಂದೂ ಅವರೇ ಹೇಳಿದ್ದಾರೆ.
 
‘ನನ್ನ ಬ್ಯಾಟಿಂಗ್ ನ ಮೊದಲಾರ್ಧವನ್ನು ಯಾವುದೇ ಯುವ ಆಟಗಾರನೂ ಅನುಕರಿಸಲು ಹೋಗಬೇಡಿ. ಯಾಕೆಂದರೆ ಮೊದಲಾರ್ಧ ನಾನು ಕೆಟ್ಟದಾಗಿ ಆಡಿದೆ. ನನ್ನ ಶೈಲಿಗೆ ಸರಿ ಹೊಂದದೇ ಹಿಟ್ ಮ್ಯಾನ್ ಥರಾ ಆಡಿದೆ. ಯಾಕೆಂದರೆ ಇನ್ನೊಂದು ತುದಿಯಲ್ಲಿದ್ದ ಕೆಎಲ್ ರಾಹುಲ್ ಗೆ ಒತ್ತಡ ಹೇರಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ದ್ವಿತಿಯಾರ್ಧದಲ್ಲಿ ಆಡಿದ ರೀತಿ ನನಗೆ ತೃಪ್ತಿಯಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :